ಚಂಪಕಮಾಲಾವೃತ್ತದ ಲಕ್ಷಣ: "ಲಘುನಾಲ್ಕಾಗಿರೆ ಚಂಪಕಂ" ಎಂಬ ಮಾತು ಪ್ರಸಿದ್ಧವಾಗಿಯೇ ಇದೆ. ಚಂಪಕಮಾಲೆ ನಾಲ್ಕು ಸಮಾನಪಾದಗಳುಳ್ಳ ಪದ್ಯ. ಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆ. ಪ್ರತಿ ಪಾದದಲ್ಲಿಯೂ ಅನುಕ್ರಮವಾಗಿ ನ, ಜ, ಭ, ಜ, ಜ, ಜ, ರ – ಎಂಬ ಏಳು ಗಣಗಳಿರುತ್ತವೆ. ಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು. ಚಂಪಕಮಾಲಾವೃತ್ತದ ಲಕ್ಷಣವನ್ನು ಕೆಳಗಣ ಸೂತ್ರ ವಿವರಿಸುತ್ತದೆ. ಸೂತ್ರ:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್ ---- ಶಬರಶಂಕರವಿಲಾಸ